ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ರಾಘವೇಂದ್ರ ಆಚಾರ್ಯರು ಬಡಗುತಿಟ್ಟು ಕಂಡ ಅಪರೂಪದ ಭಾಗವತರು : ಉದಯ ಕುಮಾರ ಶೆಟ್ಟರು

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಡಿಸೆ೦ಬರ್ 21 , 2015
ಡಿಸೆ೦ಬರ್ 21, 2015

ರಾಘವೇಂದ್ರ ಆಚಾರ್ಯರು ಬಡಗುತಿಟ್ಟು ಕಂಡ ಅಪರೂಪದ ಭಾಗವತರು : ಉದಯ ಕುಮಾರ ಶೆಟ್ಟರು

ಬಾರಕೂರು : ತುಂಬು ಶಾರೀರ ಶರೀರ, ದೈವದತ್ತವಾದ ಸುಮಧುರ ಕಂಠ, ವಿಶ್ವಕರ್ಮರಿಗೆ ದೈವದತ್ತವಾಗಿ ಬರುವ ಅಪೂರ್ವ ಲಯಸಿದ್ದಿ, ಶ್ರುತಿ ಬದ್ದತೆ, ಅಸಾದಾರಣ ರಂಗತಂತ್ರದಿಂದ ಮೇಳೈಸಿದ ರಾಘವೇಂದ್ರ ಆಚಾರ್ಯರು ಬಡಗುತಿಟ್ಟು ಕಂಡ ಅಪರೂಪದ ಭಾಗವತ, ಕಾಳಿಂಗ ನಾವಡರ ಭಾಗವತಿಕೆಯಿಂದ ಪ್ರೇರೇಪಿತರಾಗಿ ಶುದ್ದ ಸಾಂಪ್ರದಾಯದ ಗುರುಗಳಿಂದ ತಾಳಾಭ್ಯಾಸ ಮಾಡಿದ ಇವರು ಪೌರಾಣಿಕ ಮತ್ತು ಆದುನಿಕ ಪ್ರಸಂಗಗಳ ಪದ್ಯಕ್ಕೆ ಹೊಸತನವನ್ನು ನೀಡಿದ್ದಾರೆ. ಭವಿಷ್ಯದ ಯಕ್ಷಗಾನದ ಹಿಮ್ಮೇಳ ಇವರಿಂದ ಬಹಳಷ್ಟು ನಿರೀಕ್ಷಿಸ ಬಹುದು ಎಂದು ಮಣಿಪಾಲ ಎಂ. ಐ. ಟಿ ಪ್ರಾದ್ಯಾಪಕ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಎಸ್. ವಿ. ಉದಯ ಕುಮಾರ ಶೆಟ್ಟರು ಹೇಳಿದರು.

ಅವರು ಬಾರಕೂರು ಸಮೀಪ ಹೆರಾಡಿಯಲ್ಲಿ ರಾಘವೇಂದ್ರ ಆಚಾರ್ಯ ಕುಟುಂಬಿಕರಿಂದ ನಡೆದ ಪೆರ್ಡೂರು ಮೇಳದ ಸೇವೆ ಆಟದಲ್ಲಿ ಸಹಸ್ರಾರು ಪ್ರೇಕ್ಷಕರ ಮುಂದೆ ನೆಡೆದ ಮೇಳದ ಯುವ ಭಾಗವತ ರಾಘವೇಂದ್ರ ಆಚಾರ್ಯರನ್ನು ಸೇವಾಕರ್ತರ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ ಎಂದ ಅವರು ಸಮಾಜದ ಮೇರು ಕಲಾವಿದರು ಯಕ್ಷಗಾನ ಕ್ಷೇತ್ರದಲ್ಲಿ ದುಡಿದಿದ್ದರು ಎಂದು ವಿವರ ನೀಡಿದರು.

ವಿಶ್ವಕರ್ಮ ಒಕ್ಕೂಟದ ಅದ್ಯಕ್ಷ ಅಲೆವೂರು ಯೋಗಿಶ ಆಚಾರ್ಯ ಅದ್ಯಕ್ಷತೆ ವಹಿಸಿದ್ದರು. ಪೆರ್ಡೂರು ಮೇಳದ ವ್ಯವಸ್ಥಾಪಕ ವೈ. ಕರುಣಾಕರ ಶೆಟ್ಟಿ, ಉಡುಪಿಯ ವಕೀಲ ಆನಂದ ಮಡಿವಾಳ ಮುಖ್ಯ ಅತಿಥಿಗಳಾಗಿದ್ದರು. ಸೇವಾಕರ್ತ ಹೇರಾಡಿ ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದು ಭಾಗವತರನ್ನು ಬಂಗಾರದ ಉಂಗುರ ತೊಡಿಸಿ ಸನ್ಮಾನಿಸಿದರು. ಇನ್ನೋರ್ವ ಸೇವಾಕರ್ತ ಉಡುಪಿಯ ವಕೀಲ ಗಂಗಾದರ ಆಚಾರ್ಯ ಸ್ವಾಗತಿಸಿ ಸನ್ಮಾನಿತರನ್ನು ಪರಿಚಯಿಸಿದರು. ಬಳಿಕ ಅಸಂಖ್ಯ ಪ್ರೇಕ್ಷಕರ ಸಮ್ಮುಖದಲ್ಲಿ ನೂತನ ಪ್ರಸಂಗ ಗೋಕುಲಾಷ್ಟಮಿ ಪ್ರದರ್ಶಿಸಲ್ಪಟ್ಟಿತು.






Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ